ಮಾಸ್ಟರ್ ಡ್ಯಾನ್ಸರ್ ಷೋನಲ್ಲಿ ಚಂದನ್ ಶೆಟ್ಟಿ ಜಡ್ಜ್ | ವೀಕ್ಷಕರು ಗರಂ | Filmibeat Kannada

2018-02-05 24,309

Rapper ಚಂದನ್ ಶೆಟ್ಟಿ ಈ ಬಾರಿಯ 'ಬಿಗ್ ಬಾಸ್' ಗೆದ್ದಿದ್ದಾರೆ. ಗೆದ್ದ ತಕ್ಷಣ ಅವರಿಗೆ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. ಕಲರ್ಸ್ ಸೂಪರ್ ವಾಹಿನಿಯ ಒಂದು ಹೊಸ ಕಾರ್ಯಕ್ರಮಕ್ಕೆ ಅವರು ತೀರ್ಪುಗಾರರಾಗಿ ಹೋಗಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಈಗ 'ಮಾಸ್ಟರ್ ಡ್ಯಾನ್ಸರ್' ಎಂಬ ಹೊಸ ಡ್ಯಾನ್ಸ್ ಶೋ ಶುರುವಾಗಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಮಯೂರಿ, ಶೃತಿ ಹರಿಹರನ್ ಮತ್ತು ಚಂದನ್ ಶೆಟ್ಟಿ ಇದ್ದಾರೆ. ಇಂದಿನಿಂದ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಆದರೆ ಪಕ್ಕಾ ಡ್ಯಾನ್ಸ್ ಶೋ ಇದಾಗಿದ್ದು, ಇಂತಹ ಕಾರ್ಯಕ್ರಮಕ್ಕೆ ಸಿಂಗರ್ ಆಗಿರುವ ಚಂದನ್ ಶೆಟ್ಟಿ ಯಾಕೆ ಹೋದರು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮ ಪೋಸ್ಟ್ ಗಳಿಗೆ ಅನೇಕರು ತಮ್ಮ ಕಮೆಂಟ್ ಮೂಲಕ ಅವರವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


Viewer's are taken there Facebook account to express there opinion about Colors Super channel's new show 'Master Dancer'. Bigg Boss kannada season 5 winner Chandan Shetty, Shruthi Hariharan and Mayuri Upadhya are judge this show.

Videos similaires